01 February 2020

ಧೀರ ಮಹಿಳೆ…..

ಅರಿಯಲಾಗದ ಜಗದಲಿ ಗುರುವಾಗಿ ಬಂದಳಿಕೆ
ಮರಳುಗಾಡಿನಲಿ ಮರಿಚಿಕೆಯ0ತೆ ಕಂಡಳಿಕೆ
ಬಯಲು ಸೀಮೆಯ ನಡುವೆ ನೀರಾಗಿ ಹರಿದಳಿಕೆ
ಬಾಯ್ಬಿರಿದ ಮರಭೂಮಿಯಲಿ ಹಸಿರಾಗಿ ನಿಂತಳಿಕೆ

ಜಗ ಕಾಣುವ ಹೊಸಜೀವಕೆ ಆದಿ ಈ  ತಾಯಿ
ತನ್ನ ಕ0ದನ ಬೆಳೆಸಲು ತನ್ನೆ ಮರೆತ ಆಯಿ
ಇವಳ ನೆರಳಿನಲಿ ಬೀಜವಾಗುತಿರೆ ಹಸಿಗಾಯಿ
ತಾಯಪ್ರೀತಿಯಲಿ ಮನದು:ಖವೆಲ್ಲ ಮಾಯಿ

ಗಂಡನ ಜೊತೆಯಾಗಿ ಅನಿಸಿದಳಿಕೆ ಹೆಂಡತಿ
ಪತಿ-ಪ್ರಗತಿಗಾಗಿ ಹೆಗಲು ನೀಡಿದಳೀ ಸತಿ
ಕೆಲವೊಮ್ಮೆ ಎಲ್ಲರಿಂದ ಮುಚ್ಚಿಟ್ಟು ತನ್ನ ಉನ್ನತಿ
ಮಗ್ನಳಾಗುವಳು ಆದರಿಸಲು ಅತಿಥಿ

ಜನಿಸಿದಳಿಕೆ ಮಗಳಾಗಿ,ಅಣ್ಣನಿಗಾದಳು ತಂಗಿ
ತಮ್ಮನಿಗಾದಳಿಕೆ ಅಕ್ಕ ತೊರಿಸುತ್ತಾ ಬಿನ್ನ ಭಂಗಿ
ಮನೆಗೆ ಸೊಸೆಯಾಗಿ-ಅಳಿಯನಿಗಾದಳಿಕೆ ಅತ್ತೆ
ಬೆಳೆಯುತಾ ತನ್ನ ಸುತ್ತ ಸಂಬಂಧಗಳ ಮತ್ತೆ-ಮತ್ತೆ

ಜಗನಿಯಮಗಳ ಅನುಭವಿಸುತ್ತ ಬೆಳೆಯುತಿರೆ ಹೆಣ್ಣುತೆಳೆ
ಇವಳ ನಿಲುಮೆಯಲಿ ಚಂದಸಾಗುತಿರೆ ಬಾಳೆ
ಎಂದಿಗೂ ಅಲ್ಲ ಹೆಣ್ಣು ಅನಾಗರಿಕ ತಿಳಿಯದ ಹಸುಳೆ
ಪುರುಷನಿಗೆ ಸಮನಾಗಿ ಬೆಳೆಯುತಿರುವ ಧೀರ-ಮಹಿಳೆ
                                                                     - ಸುನಿತಾ

ರೀಲ್ ರೀಯಲ್ ಆದಾಗ…….



Image result for f4 korean drama images


ಸಮೂಹ ಮಾಧ್ಯಮದ ಜೊತೆ ಸೋಲಿರದ ಸಂಬಂಧ ಬೆಸೆಯುತ್ತಾ, ಮಾನವ ತನ್ನ ಜನಾಂಗದ ಸಂಬಂಧಗಳನ್ನು ಬೆಳೆಸುತ್ತಿದ್ದಾನೆ. ಸಮೂಹಮಾಧ್ಯಮಗಳು ಸಹಜತೆ ಮತ್ತು ಅಸಹಜತೆಯ ಚಿತ್ರಗಳನ್ನು  ಮನಮುಟ್ಟುವಂತೆ ಪ್ರೇಕ್ಷಕರನ್ನು ರಂಜಿಸುತ್ತವೆ. ನೈಜಕಥೆ ಆಧಾರಿತ ಚಿತ್ರಗಳಂತೂ ನೋಡುಗರ ಕಣ್ಣರಳಿಸುತ್ತವೆ.ಈ ರೀಲ್ ಮತ್ತು ರೀಯಲ ಕಥೆಗಳು ಕೆಲವರ ಬಾಳಿನಲ್ಲಿ ಮಾದರಿಯಾದರೆ ಇನ್ನೊಬ್ಬರ ಜೀವನದಲ್ಲಿ ಕಂಟಕವಾಗಿ ಉಳಿದು ಬಿಡುತ್ತವೆ.

25 January 2020

ಚರಗ - ರೈತರ ಹಬ್ಬ


ನಮ್ಮ ದೇಶ ಭಾರತ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಹೆಮ್ಮೆಗೆ ಕಾರಣವಾದ ವಿಷಯಗಳು ಹಲವು. ಭಾರತದ ಸಂಕೃತಿ, ಕಲೆ, ಸಂಪ್ರದಾಯ, ಇತಿಹಾಸ, ನೈಸರ್ಗಿಕ ಸೌಂದರ್ಯ ಇತ್ಯಾದಿ ಜನರ ಮನಸೆಳೆಯುತ್ತದೆ. ಹಳೆ ಕಾಲದಿಂದಲೂ ಜೀವಂತವಾಗಿರುವ ಅನೇಕ ಸಂಪ್ರದಾಯಗಳು ಭಾರತದ ಹಿರಿಮೆಯನ್ನು ದ್ವಿಗುಣಗೊಳಿಸಿವೆ. ಭಾರತದ ಪ್ರತಿ ರಾಜ್ಯ ತನ್ನದೇ ಆದ ವೈಶಿಷ್ಟಯವನ್ನು ಹೊಂದಿದೆ. ಕರ್ನಾಟಕದ ಭಾಷೆ ಚಂದ, ಹಬ್ಬಗಳ ಆಚರಣೆ ಚಂದ. ನಮ್ಮ ಉತ್ತರ ಕರ್ನಾಟಕದಲ್ಲಂತೂ  ಹಬ್ಬಗಳಿಗೆ ವಿಶೇಷ ಸ್ಥಾನ ಮಾನ, ಪ್ರತಿಯೊಂದು ಸಣ್ಣ ಆಚರಣೆಯೂ ಹಬ್ಬವಾಗೇ ಕಾಣುತ್ತದೆ.  
ಇಷ್ಟೆಲ್ಲಾ ಹಿನ್ನಲೆಯನ್ನು ಕೊಡಲು ಕಾರಣ, ನಾವು ಮೊನ್ನೆ ಆಚರಿಸಿದ ಹಬ್ಬ ಚರಗ. ಅನ್ನದಾತೆಯಾದ ಭೂದೇವಿಗೆ ನಮನ ಸಲ್ಲಿಸುವ ಸಾಂಪ್ರದಾಯಿಕ ಆಚರಣೆ. 

ಹಬ್ಬದ  ಹಿನ್ನಲೆ:
------------------
 ಉತ್ತರ ಕರ್ನಾಟಕದಲ್ಲಿ ರೈತರು ತಾವು ನಂಬಿದ ಭೂಮಿಗೆ ಪೂಜೆ ಸಲ್ಲಿಸುವ ವಿಶೇಷ ಹಬ್ಬ. ಎಳ್ಳ ಅಮವಾಸ್ಯೆ ದಿನದಂದು ರೈತರು ತಮ್ಮ ಕುಟುಂಬಸಹಿತ, ವಿವಿಧ ರೀತಿಯ ಅಡುಗೆಮಾಡಿ, ಎತ್ತಿನಗಾಡಿಯಲ್ಲೊ, ಟ್ಯಾಕ್ಟರ್ನಲ್ಲೋ ತಮ್ಮ  ಹೊಲಕ್ಕೆ  ಅತೀ ಸಂಭ್ರಮದಿಂದ ಪ್ರಯಾಣ ಮಾಡುತ್ತಾರೆ. ಮಣ್ಣಿನ ಹೆಂಟೆಯಿಂದ ಮಾಡಿದ ಐದು ಪಾಂಡವರನ್ನು ಪೂಜಿಸಿ, ತಾವು ಮಾಡಿಕೊಂಡು ಬಂದ ಆಡುಗೆಯನ್ನು ನೈವೇದ್ಯ ಮಾಡಿ, ಅದನ್ನು ಒಂದು ತಗ್ಗಿನಲ್ಲಿ ಹಾಕಿ ಮುಚ್ಚುತ್ತಾರೆ. ತದನಂತರ ಹೊಲದ ತುಂಬಾ ತಿರುಗಾಡಿ "ಹುಲ್ಲಿ ಹುಲ್ಲಿಗೋ, ಚಲ್ಲಿ ಚಲ್ಲಿಗೋ" ಎಂದು ಕೂಗುತ್ತ  ಆಡುಗೆಯನ್ನು ಎಲ್ಲ ಕಡೆ ಪಸರಿಸುವಂತೆ ಭೂಸಮರ್ಪಣೆ ಮಾಡುತ್ತಾರೆ. ಇದಕ್ಕೆ ವೈಜ್ಞಾನಿಕ  ಹಿನ್ನಲೆಯೂ ಉಂಟು. ಈ ಸಮಯದಲ್ಲಿ ರೈತರು ಹಿಂಗಾರೆ ಬೆಳೆಯನ್ನು[ ಕಡಲೆ, ಜೋಳ ] ಬೆಳೆದಿರುತ್ತಾರೆ. ಚಳಿ ಸರಿದು, ಬಿಸಿಲು ಆವರಿಸುವ ಸಮಯವಿದು. ಉಷ್ಣ ಹೆಚ್ಚಿದಂತೆ ಕ್ರಿಮಿ ಕೀಟಗಳ ಬೆಳವಣಿಗೆಯು ಹೆಚ್ಚಾಗುತ್ತದೆ, ಇವುಗಳು ಹೊಲದ ಬೆಳೆಗಳನ್ನು ನಾಶಮಾಡುತ್ತವೆ. ರೈತರು ಚರಗದಲ್ಲಿ ಚೆಲ್ಲಿದ ಆಹಾರವನ್ನು ಕಂಡು ಹಕ್ಕಿಗಳು, ಅದನ್ನು ತಿನ್ನಲು ಕೆಳಗಿಳಿದಾಗ, ಬೆಳೆಗೆ ಅಂಟಿದ ಕೀಟಗಳನ್ನು ಸೇವಿಸುತ್ತವೆ ಮತ್ತು ಬೆಳೆಯನ್ನು ಹುಳುಗಳಿಂದ ಮುಕ್ತಮಾಡುತ್ತವೆ. ಬೆಳೆ ಸಂಮೃದ್ದವಾಗಿ ಬೆಳೆದು ರೈತನ ಮನ ತಣಿಸುತ್ತದೆ. ಹೀಗೆ ಈ ಹಬ್ಬ ಸಾಂಪ್ರದಾಯಿಕ  ಮತ್ತು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿದೆ. 

12 January 2020

ಹಳೆ ದಾರಿ , ಹೊಸ ಅನುಭವ

Image result for gadag railway station


ಬದುಕಿನ ಚಿತ್ರಣದಲಿ ಹೊಸ ಬಣ್ಣದ ಅನುಭವಗಳನ್ನು ಮೂಡಿಸುವ ಭಾಗಗಳೆಂದರೆ ಪ್ರಯಾಣದ ದಿನಗಳು.ಇಂತಹ ದಿನಗಳು ಬದುಕಿಕೆ ಹೊಸ ಪ್ರೇರಣೆ,ಉತ್ಸಾಹ ಮತ್ತು ಸಂತೋಷಗಳನ್ನು ನೀಡುತ್ತವೆ.ಕೆಲವೊಬ್ಬರ ಜೀವನ ಪ್ರಯಾಣದಲ್ಲಿ ಮುಗಿದುಬಿಡುತ್ತದೆ.ಮೆಟ್ರೊ ಸಿಟಿ ಎಂದು ಕರೆಸಿಕೊಳ್ಳುವ ನಗರಗಳಲ್ಲಿ ಜನರ ಜೀವನ ಪ್ರಯಾಣದಿಂದಲೆ ಶುರುವಾಗುತ್ತದೆ.
           ಪ್ರಯಾಣದ ನಿಜ ಅನುಭವ ಪಡೆಯಬೇಕಾದರೆ ರೈಲು ಪ್ರಯಾಣ ಹೊಸ ಜೀವನ-ಪರಿಚಯದೊಂದಿಗೆ ಬದುಕಿನ ಬಂಡಿಗೆ ನವತಿಳಿಯನ್ನು ಬಡಿಸುತ್ತದೆ.ನಮ್ಮ ಉತ್ತರ ಕನ್ನಡದ ಪ್ರದೇಶವನ್ನಾರಿಸಿದರೆ ಹರಿಪ್ರಿಯಾ ಎಕ್ಸಪ್ರೆಸ್,ಹುಬ್ಬಳ್ಳಿ ಪ್ಯಸೆಂಜರ,ಸೊಲ್ಲಪುರ ಎಕ್ಸಪ್ರೆಸ್ಸ್ ಇತರೆ ರೈಲುಗಳು ಇಲ್ಲಿಯ ಜೀವನ ಶೈಲಿಗೆ ಉದಾಹರಣೆಗಳನ್ನು ಬಿಂಬಿಸುತ್ತವೆ.
        ಸೊಲ್ಲಪುರ ಎಕ್ಸಪ್ರೆಸ್ಸ್ ,ಇದು   ಸೊಲ್ಲಾಪುರ,ಇಂಡಿ,ಬಿಜಾಪುರ್,ಬಾಗಲಕೊಟೆ ,ಗದಗ,ಹುಬ್ಬಳ್ಳಿ ಮತ್ತಿತರೆ ಸ್ಠಳಗಳಿಗೆ ಭೇಟಿ ನೀಡಿ ,ತನ್ನ ಮಡಿಲ ಮಕ್ಕಳನ್ನು ದಡ ಸೇರಿಸಿ ತನ್ನದೆ ಆದ ಶೈಲಿಯಲ್ಲಿ “”ಕ್ಞೂಂಂ ಂ ” ಎಂದು ವಿದಾಯ ಹೇಳುತ್ತದೆ.ರೈಲಿನಲ್ಲಿ ಆ ಮಕ್ಕಳ ಮಾತು, ಆಟ, ಪೀಕಲಾಟ, ಜಗಲಾಟ ಎಲ್ಲವು ವಿವಿಧ ರೀತಿಯ ಮುನ್ನುಡಿಗಳಿಗೆ ಸಹಿ ಹಾಕುತ್ತವೆ.ಮೊದಲೆ ಹೇಳಿದಂತೆ ಇದು ಉತ್ತರ ಕರ್ನಾಟಕ ಮಂದಿಯನ್ನೊಳಗೊಂಡ ರೈಲು,ನಮ್ಮಕಡೆ ಮಂದಿ ಮಾತಿನಲಿ ಸ್ವಲ್ಪ ಖಡಕು, ಆದರೆ  ಮನದಾಳ ಪ್ರೀತಿ,ನಂಬಿಕೆ ಮತ್ತು ಕರುಣೆಯಲಿ ಇವರ ಮೀರಿಸುವವರಿಲ್ಲ.

ನನ್ನಪ್ಪಾಜಿ


ದಣಿವರಿಯದ ದಣಿ ನೀ ಧನಪಾಲಕ

ಆಡಂಭರ ಜೀವನ ತೊರೆದು, ಸರಳ ಜೀವನದಾಯಕ
ಸದಾ ಚಿಲುಮೆಯ ಬುಗ್ಗೆ ನಿನ್ನಲಿ ಹಸನ್ಮುಖ
ನೀ ಬೇಡುವರ ಪಾಲಿಗೆ ನಿತ್ಯ ಫಲದಾಯಕ……

ಕಲಿವ ಮಕ್ಕಳ ಆಸಕ್ತಿ  ನೋಡಿ ನೀ ಹಿಗ್ಗುವೆ
ದಲಿತರ ಕಂಡರೆ ತುಂಬು ಹೃದಯದಿ ಕುಗ್ಗುವೆ
ಕೆಲಸದ ಗದ್ದಲಲಿ ಮರೆಮಾಚುವುದು ನಿನ್ನ ಹಸಿವೆ
ನಿನ್ನೆದೆಯಾಳ ಪ್ರೀತಿಯ ಮಹಾ ಸಾಗರವೆ

ಬಲು ನಿಖರ ನೀ ನಡೆಸುವ ವ್ಯವಹಾರ
ತಲೆಬಾಗುವನು ನಿನ್ನ ಜಾಣತನಕೆ ಭ್ರಷ್ಟ ಬಂಡಕೋರ
ಮೈಗಂಟಿದ ಕವಚ ನಿನ್ನಲಿ ಆಚಾರ ವಿಚಾರ
ನೀ ನಯವಿನಯದಲಿ ದೊಡ್ಡ ಸಾಹುಕಾರ…

ಸಿರಿಯ ನಗರಿಯಲಿ ತೆಳೆದೆ ಬಡ ಜೀವನ
ನಿನ್ನಾದರ್ಶಗಳು ನಮ್ಮ ಬಾಳಿಗೆ ಸಂಜೀವನ
ನೀ ರಚಿಸಿದೆ ನಮಗಾಗಿ ಬಾಳಬಂಡಿಹೂಡುವ ಕವನ
ನಿನ್ನ ನೆರಳಲಿ ನಮ್ಮ ಜೀವನ ಸದಾ ಪಾವನ….. 

05 January 2020

ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ….

 
 ಉನ್ನತ ಶಿಕ್ಷಣಕ್ಕಾಗಿ ಕಷ್ಟಪಟ್ಟು ಓದಿ, ಮನದಲಿ ಸಾವಿರ ಆಸೆಗಳ ಬುತ್ತಿ ಕಟ್ಟಿ ,ಮನೆಯನ್ನು ಬಿಟ್ಟು ಹಾಸ್ಟೆಲ ಸೇರಿ ನಿಟ್ಟುಸಿರು ಬಿಡುವ ಸಾವಿರಾರು ವಿದ್ಯಾರ್ಥಿನಿಯರು ಸಾರ್ಥಕ ಬದುಕ ಜೀವಿಸುವ ಕನಸು ಕಾಣುತ್ತಾರೆ.ಮೊದ-ಮೊದಲು ಎಲ್ಲವು ಹೊಸದು,ತಂದೆ-ತಾಯಿಯ ಆಶ್ರಯದಲ್ಲಿ ಹಾಯಾಗಿ ಬೆಳದ ಹೆಣ್ಣು-ಮಕ್ಕಳಿಗೆ ಹೊರ ಪ್ರಪಂಚದ ಜ್ಞಾನ ಕಡಿಮೆ.ಇನ್ನು ಕೆಲ ವರ್ಷಗಳ ಕಾಲ ನಮ್ಮ ಜೀವನ ಹಾಸ್ಟೆಲನಲ್ಲಿ ಎಂದುಕೊಂಡು  ಹೊಸ ಸಂಬಂಧವನ್ನು ಹೊಸ ಗೆಳತಿಯರೊಂದಿಗೆ ಬೆಸೆಯುತ್ತಾ ಮನೆಯವರಿಂದ ದೂರ ಇರುವ ನೋವನ್ನು  ಸ್ನೇಹದಲ್ಲಿ ಮರೆಯುತ್ತಾರೆ.

ಹೊಸದರಲ್ಲಿ ಎಲ್ಲವು ಸೋಜಿಗ, ಬೆಳಿಗ್ಗೆ ಬೇಗನೆ ಎದ್ದು ,ಬಾತರೂಮ ಮುಂದೆ ಬಕೆಟ್ ಇಟ್ಟು ಕ್ಯೂನಲ್ಲಿ ನಿಂತು ಸ್ನಾನಮಾಡಿ ತಡವಾಗಿದೆ ಎಂದು ಚಡಪಡಿಸಿ ಸ್ವಲ ಟಿಫಿನ ಮಾಡಿ ಗೆಳತಿಯರೊಂದಿಗೆ ಕಾಲೇಜಿಗೆ ಹೊರಡುತ್ತಾರೆ.ಮದ್ಯಾಹ್ನ ಊಟಕ್ಕೆಂದು ಮತ್ತೆ ಹಾಸ್ಟೆಲಿಗೆ ಬರುತ್ತಾರೆ.ಕೈಯಲ್ಲಿ ಪ್ಲೇಟು ಹಿಡಿದು ಚಪಾತಿಗಾಗಿ ಕ್ಯೂ ಹಚ್ಚುತ್ತಾರೆ.ಸರದಿ ಸಾಲಿನಲ್ಲಿ ನಿಂತಾಗ ಏನೋ ಮುಜುಗರ ಎಲ್ಲರೂ ತನ್ನನೆ ನೋಡುತ್ತಿರುವರೆನೋ ಎಂಬ ಭಾವ.ಚಪಾತಿ ಸಿಕ್ಕ ನಂತರ ಪಲ್ಲವನ್ನು ಬಡೆಸಿಕೊಂಡು ಮನೆಯಿಂದ ತಂದ ಉಪ್ಪಿನಕಾಯಿ-ಚಟ್ನಿಯ ಜೊತೆ ಊಟವನ್ನು ಸವಿಯುತ್ತಾ ,ಅಡುಗೆ ಮಾಡಿದ ಸಿಬ್ಬಂದಿಗೆ ಕಮೆಂಟ್ ಕೊಡುತ್ತಾ ಊಟ ಮುಗಿಸುತ್ತರೆ.

01 January 2020

ಎರಡು ಸೊನ್ನೆ ಎರಡು ಎರಡು 😮


ಶೀರ್ಷಿಕೆ ನೋಡಿ ಆಶ್ಚರ್ಯವಾಗಬಹುದು, ಒಂದು ನಿಮಿಷ ಯೋಚಿಸಲೂಬಹುದು ಅಲ್ಲವೇ !!

ತಿಳಿದವರು ಹೇಳುತ್ತಾರೆ- ತಮ್ಮ,,,  ಬಾಳೊಂದು ಲೆಕ್ಕ, ಅದ ಅರಿ ನೀ ಪಕ್ಕಾ. ಕೂಡು- ಕಳೆ , ಗುಣಾಕಾರ - ಭಾಗಾಕಾರ ಎಲ್ಲದರ ಮೊತ್ತ ಸರಿಯಾಗಿರಬೇಕು. ಇಲ್ಲಿ ಲೆಕ್ಕದ ವಿಚಾರ ಏಕೆ ಬಂತೆಂದರೆ, ಈ ಮೇಲಿನ ಎರಡು - ಸೊನ್ನೆಗಳು ನಾ-ಹೆಚ್ಚು, ನೀ-ಕಡಿಮೆ ಎಂದು ತಾರತಮ್ಯ ಮಾಡುತ್ತಿವೆ. ಜವಾಬ್ದಾರಿವಹಿಸಿ ಕೆಲಸ ಮಾಡುವುದು ಎರಡರ ಗುಣ, ಆಲಸಿಯಾಗಿರುವುದು ಸೊನ್ನೆಯ ಗುಣ. ಯಾವುದಕ್ಕಾಗಿ ಈ  ಜಗಳ ಎಂದು ತಿಳಿದಾಗ, ಸಾಲಿನಲ್ಲಿ ಹೋಗುವಾಗ ಸೊನ್ನೆ ತನ್ನ ಹಿಂದೆ ಬರಬೇಕು ಎಂಬುದು ಎರಡರ ವಾದ. ಎಲ್ಲರಿಗಿಂತ ನಾ ಸಾಲಿನ ಮುಂದಿರಬೇಕು ಎಂಬುದು ಸೊನ್ನೆಯ ವಾದ. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಎರಡು ಮತ್ತು ಸೊನ್ನೆ ತಮ್ಮ ಸ್ನೇಹಿತನ್ನು ಕರೆದರು. ಎರಡರ ಸ್ನೇಹಿತ ಎರಡು, ಸೊನ್ನೆಯ ಸ್ನೇಹಿತ ಸೊನ್ನೆ. ನಾಲ್ವರು ಸೇರಿ ಸಂಖ್ಯಾಪಂಡಿತನ ಹತ್ತಿರ ಹೋದರು, ಅವರಿಗೆ ತಮ್ಮ ಸಮಸ್ಯೆಯ ವಿಚಾರ ತಿಳಿಸಿದರು. ಸಂಖ್ಯಾಪಂಡಿತ ನಕ್ಕು ಹೀಗೆಂದರು. 

31 December 2019

ನನ್ನ ಕಲಾಸಕ್ತಿ 😇



ಮಾತೆ ಸರಸ್ವತಿ 

ಸರ್ವಪಲ್ಲಿ ರಾಧಾಕೃಷ್ಣನ 
ನನ್ನ ಹೀರೋ - ಹೃತಿಕ್ ರೋಷನ್ 

ಮಹಾದೇವ

ಕಾಲೇಜ ಡೇಸ 😛


Image result for basaveshwar engineering college



ಮಾನವ ಸಂಪೂರ್ಣ ವಿಕಸನಕೆ ಮತ್ತು ವಿನಾಶಕೆ ಮುಖ್ಯ ಕಾರಣವೆಂದರೆ ಅವನಲ್ಲಿ ಉಳಿದ ನೆನೆಪುಗಳು. ಇಂತಹ ಸಾವಿರ ನೆನಪುಗಳನ್ನು ಹೊತ್ತ ಕಾಲೇಜ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಉದಾಹರಣೆಗಳನ್ನು ನೋಡಲು-ಕೇಳಲು ಮನಸ್ಸು ಉತ್ಸುಕವಾಗುತ್ತದೆ.

ಹರೆಯದ ಪ್ರವಾಸ [ ಕಾಲೇಜ್ ಟ್ರಿಪ್ 2016 ]

ಕುಣಿಯುತ ನಲಿಯುತ ಹೊರಟಿತು ಈ ಪಯಣ
ಬಾಳ ಬುತ್ತಿಯ ನೆನಪುಗಳ ಕಟ್ಟಿ ನಮ್ಮ ತನಯ.......

ಸಾಗಿತು ದಾರಿ ಮೊದಲು ತಿಲಕವ ಇಟ್ಟು
ಕಾಯುತ್ತಿತ್ತು ನಮ್ಮ ಬರುವಿಕೆಗೆ ರಂಗನತಿಟ್ಟು 
ನೋಡ ಬಂದೇವು ಪಟ್ಟಣದಲ್ಲಿನ ಶ್ರೀರಮಣ
ರಂಗನಾಥನ ವೈಭವದ ಶ್ರೀರಂಗಪಟ್ಟಣ...

ಮಲ್ಲಿಗೆಯ ನಾಡು ಕದಂಬರ ತವರೂರು
ನಮ್ಮ ಪ್ರವಾಸ ಬಂದು ಸೇರಿತು ಮೈಸೂರು
ಅರಮನೆಯ ಅಂದ ಬೃಂದಾವನದ ಚಂದ
ನಲಿಸಿತು ನಮ್ಮಲ್ಲಿ ಬೆಸೆದು ದಿವ್ಯ ಬಂಧ.....

ಮರುದಿನ ಪಡೆದು ಚಾಮುಂಡಿಯ ದರ್ಶನ
ತಾಯಿಯಲಿ ನಮ್ಮ ಬೇಡಿಕೆಗಳ ನಮನ
ತಣಿಸಿತು ಎಲ್ಲರ ಭರಚುಕ್ಕಿ ಜಲಾಶಯ
ತಲಕಾವೇರಿಯಲಿ ತೀರಿತು ನಮ್ಮ ಆಶಯ....

ನೋಡ ಹೋದೆವು ಅನ್ಯದೇಶಿಯರ ಸಂಸ್ಕ್ರತಿ
ನೆನಪಾದಳು ಎಲ್ಲರಿಗೂ ನೆಲೆ ನೀಡಿದ ಜಯಭಾರತಿ
ಕಣ್-್ಣತಣಿಸಿತು ಮನ-ಉಣಿಸಿತು ಕಾವೇರಿಯ ನಿಸರ್ಗಧಾಮ
ರಾಜಾಸೇಟ್‍ನಲ್ಲಿ ಸೂರ್ಯಾಸ್ತಮದ ದೃಶ್ಯಾಗಮ.....
ಮೂರನೆ ದಿನಾರಂಭ ನೋಡುತ ಜಲಾಶಯ
ತಿಳಿಸುತ ಪ್ರಕೃತಿಗೆ ಅಭಿಮಾನದ ಶುಭಾಶಯ
ಮಲ್ಪೆಯಲಿ ಸಂತೋಷದಲೆಗಳ ಅಬ್ಬರ
ಮನಿಪಾಲ ಸಂಗ್ರಹಾಲಯ ಮಾಡಿತು ನಮ್ಮ ಮಬ್ಬರ....

ಉಪ್ಪಿನ ಬಿಸಿ ಮುಟ್ಟಿಸಿತು ಉಡುಪಿ
ಕೃಷ್ಣನ ದರ್ಶನದಿಂದ ಪಾವನ ಪ್ರತಿ ಪಾಪಿ
ನಮ್ಮೆಲ್ಲರ ಭೂಕೈಲಾಸ ಮುರುಡೇಶ್ವರ
ಇಡಗುಂಜಿಯಲಿ ಕಂಡೆವು ವಿಘ್ನೇಶ್ವರ.......

ಮೊದಲ ಅನುಭವಗಳ ಕದತಟ್ಟಿ
ಎಲ್ಲ ಭಯಗಳ ಒಂದೆಡೆ ಮೂಲೆಕಟ್ಟಿ
ಬಸ್‍ನಲ್ಲಿ ಧೀರ್ಘಪಯಣ, ರಾತ್ರಿಯ ಬಯಲು ನಿದ್ದೆ
ಮನದ ಕೋಣೆಯಲಿ ಅನಿಸಿತು ನಾನಿಂದು ಗೆದ್ದೆ......

ಹರೆಯದ ಸವಿನೆನಪುಗಳ ಸಂಗಮ
ಹುಚ್ಚುಮನಸಿನಲಿ ಭಾವದಾಗಮ
ಪಯಣದಲಿ ಸವಿದೆವು ನಾವೆಲ್ಲ ಸಿಹಿ ಮಕರಂದ
ಅಮರವಾಗಿರಲಿ ಗೆಳತಿಯರೆ ನಮ್ಮೆಲ್ಲರ ಸ್ನೇಹಬಂಧ......
-
                                                                          - ಸುನಿತಾ.

ಒಂಟಿದಾರಿ

ಒಂಟಿದಾರಿಯ ನಡುವೆ ನಡೆಯುತಿರುವೆ ನಾ ಒಂಟಿ
ದಾರಿಯ ತು0ಬೆಲ್ಲ ಬೀಡುಬಿಟ್ಟಿವೆ ಮುಳ್ಳು-ಕಟಿ
ಸೋಲುತಿದೆ ಈ ಜೀವ ಅನುಭವಿಸಿ ಜೀವಭಯ
ಆಲಂಗಿಸಿ ಹೇಳುವವರಿಲ್ಲ ಅಭಯ………
ಬಾಳಬುತ್ತಿಯ ಹೊತ್ತು ಸಾಗುತಿರೆ ನಾ ಅಂಧೆ
ಅ0ಧಕಾರದಲಿ ಮುಳುಗಿ ಹುಡುಕುತಿರುವೆ ಬೆಳಕಿನ ಗಂಧ
ಬಿರುಗಾಳಿಯ ಆರ್ಭಟಕೆ ಸಿಕ್ಕಿ ಆಗುತಿರುವೆ ನಾ ಚೂರು
ಚೂರಿನ ಜೀವಕಣದಲೂ ಆಕ್ರಂದನದ ಕರಾರು……..
ಒ0ಟಿದಾರಿಯ ಜೋತೆ ನಾನಡೆದೆ ದು:ಖ ಮೀರಿ
ಮುಂದೊಂದು ನೆಮ್ಮದಿಯ ಆಶ್ರಯ ಕೋರಿ
ಕೋರಿಕೆ ಈಡೇರಿ ದೊರೆಯಿತೆನಗೊಂದು ನಿಲಯ
ನಿಲಯದ ತುಂಬ ನಮ್ಮಂತ ನಿರಾಶ್ರಿತರ ವಲಯ…....
ವಲಯದ ಒಡನಾಟ ನೀಡಿತೆನಗೆ ಗಟ್ಟಿಸ್ನೇಹ
ತುಂಬು ಹೃದಯದಿ ಜೀವಿಸುವೆ ತಿಳಿದು ಈ ನೇಹ
ಭಾವದಲೆಯಲಿ ತೇಲಿ ನೆನೆಯುತಿರುವೆ ಒಂಟಿದಾರಿ
ಅನುಭವ ಪುಟದಲಿ ನೆನಪಿನ ಬಣ್ಣ ಸೋರಿ……     
                                                                    - ಸುನಿತಾ

ಗುರು

ಜಗಜೀವರಾಶಿಯ  ಆದ್ಯ ಜನಕ
ನೆಲೆಸಿರುವ ಜೀವ ಇರುವ ತನಕ
ಮೂರ್ಖಗೆ ಬುದ್ಧಿಯ ಕುಲಶದ ಕನಕ
ಮೂಡಿಸುತಿಹನು ಎಲ್ಲೆಡೆ ಙನಾರ್ಜನೆಯ ಬೆಳಕ……..
ಸಾಗರದ ಆಳ ಗುರುವಿನ ಅಂತರಂಗ
ಗುರುವಿನ ತಿಳಿಮಾತು ನಮ್ಮ ಬಾಳ ತರಂಗ
ವಿದ್ಯಾಲಯವು ಗುರು ಕಟ್ಟಿದ ನಾಟಕರಂಗ
ನೀಲಿ ಆಗಸದಲಿ ನಾವೆಲ್ಲ ಪತ್ರಧಾರಿಗಳೆಬ ಪತಂಗ…….
ಆದಿ-ಅ0ತ್ಯಗಳ ನಡುವೆ ಗುರುವಿನ ಪಯಣ
ಕುಣಿಯುತಿಹನು ಗುರುತಾಳಕೆ ಜಗದೊಡೆಯ ರಮಣ
ಅಳಿಸುತಿಹನು ಎಲ್ಲರಲಿ ಅವೈಜಾÐನಿಕ ಬ್ರಮಣ
ಶಾರದೆಯ ಆಗಮನಕೆ ಗುರುವಿನಿಂದ ಆಮ0ತ್ರಣ……
ಸ0ಚರಿಸುತಿದೆ ಎಲ್ಲರಲಿ ಗುರುವಿನ ಸ-ಮನ
ಸೆಳೆಯುತಿರುವ ಬೊಧನೆಯಲಿ ವಿದ್ಯಾರ್ಥಿಗಳ ಗಮನ
ಗುರುವಿನಾಶಿರ್ವಾದದಲಿ ನಮ್ಮದುಶ್ಟತನಗಳ ಶಮನ
ತಿಳಿಸೋಣ ಅವರಿಗೆ ಭಾವಪೂರ್ವಕ ನಮನ…..
                                                                         - ಸುನಿತಾ 

ಬಯಸಿ ನಿನ್ನ ಸ್ನೇಹ

ನಿನ್ನ ಸ್ನೇಹವ ಬಯಸಿ ಬರುತಿದೆ ಈ ಜೀವ
ಜೀವದಾಳದಲಿ ನಿನ್ನೊಲುಮೆಯ ಹೊಸ ಭಾವ…………
ಮೊಗ್ಗುತಾವರೆ ನಾ,ನೀ ಸೂರ್ಯಕಿರಣವಾಗು ಬಾ
ಸೂಸುವೆ ನಿನ್ನ ಸ್ಪರ್ಷದಲಿ ಮೆಲ್ಲುವ ಸೌರಭವಾ
ಕೆರೆತೊರೆದು ದೇವರಪೂಜೆಗೆ ನಾನಾಗ ಬೇಕು ಅಣಿ
ಕಾಯುತಿರುವೆ ಬೇಕಾಗಿ ನಿನ್ನ ಚೇತನದ ಸವಿಪನಿ……
ಔತಣವಿಲ್ಲದ ಜಾಗದಲಿ ನಡೆಯುತಿರುವೆ ನಾಒಂಟಿ
ಜೊತೆನಡೆ ಕಿತ್ತು ನನ್ನ ಸುತ್ತಮುತ್ತಲಿನ ಮುಳ್ಳುಕಂಟಿ
ನಿಶ್ಶಬ್ದ ಜಗದಲಿ ಕೇಳಲಿ ನಿನ್ನ ಚೇತನದ ಕೂಗು
ಆ ಚೇತನದ ಬೆಳಕಲಿ ಸದಾ ನನ್ನ ಜೊತೆ ಸಾಗು…….
ಕಪ್ಪು-ಬಿಳುಪಿನ ಚದುರಂಗದಾಟದಲಿ ನಾ ಕಾಲಾಳು
ಯೋಚಿಸಿ ನಡೆಸು ನೀ ನನ್ನ ತಿಳಿದು ಆಟದ ತಿರುಳು
ಸಹಿಸಲಾರೆ ನಾ ನಿನ್ನ ಒಂದುಘಳಿಗೆಯ ಮರೆಯ
ನೇಹದ ನೆಪದಲಿ ಬಯಸುತಿರುವೆ ನಿನ್ನಾಸರೆಯ……
                                                                   
                                                                     - ಸುನಿತಾ.

ವೈದ್ಯ

ದೈಹಿಕವಾಗಿ ಈ ಶರೀರ ಇನ್ನಿಲ್ಲದಂತೆ ಸೋತು
ಕೊಟ್ಟಿದೆ ರೋಗಾಣುಗಳ ಜೊತೆ ಸಾಥು
ದೇಹದಲಿ ರೋಗ-ರುಜುನೆಗಳ ಅಟ್ಟಹಾಸ
ಮನುಷ್ಯನಿಂದ ದೂರವಾಗಿದೆ ಮಂದಹಾಸ

ಅಟ್ಟಹಾಸವ ಸೆದೆಬಡಿಯಲು ಬಂದ ವೈದ್ಯ
ತಿನ್ನಿಸಿದ ರೋಗಿಗೆ ಔಷಧದ ಖಾದ್ಯ
ಕೆಲವೊಮ್ಮೆ ಆಗಿಬಿಡುವನು ಯಮನ ವೈರಿ
ಕಾಳಗದಲಿ ಗೆದ್ದುಬರುವ ರೋಗಿಯ ಜೀವ ಕೋರಿ

ರೋಗಿಗಳ ಜೀವಕೆ ತನ್ನ ಜೀವ ಮುಡಿಪುಮಾಡಿ
ಮಾಡುತಿಹನು ಜಗದೆಲ್ಲೆಡೆ ಜಗಸೋಜಿಗ ಮೋಡಿ
ವಿಶ್ವದ ಮೂಲೆ ಮೂಲೆಯಲಿ ಅಗತ್ಯ ಇತನ ಪರಿ
ಜಪಿಸೋಣ ಸದಾ ವೈದ್ಯೋ ನಾರಾಯಣೋ ಹರಿ
                                                              - ಸುನಿತಾ

ಜೀವನ ಸಾಗುತಿರೆ'

ಕನಸು ಎಂಬ ನೇಸರ ಮೂಡುತಿರೆ
ಕಿರಣವೆಂಬ ಆಸೆಗಳು ಭೂಮಿಯ ಮುತ್ತುತಿರೆ
ಮನಸ್ಸು ಎಂಬ ಹೂವು ಅರಳುತಿರೆ
ಇ0ಜೀನಿಯರಿಂಗನಲ್ಲಿ ಜೀವನ ಸಾಗುತಿರೆ
ತಂದೆ-ತಾಯಿಯ ಬಿಟ್ಟು ಮನ ನೋಯ್ಯುತಿರೆ
ಒಳಒಳಗೆ ಮ ಬಿಕ್ಕಿ-ಬಿಕ್ಕಿ ಅಳುತಿರೆ
ಹಾಸ್ಟೆಲನಲ್ಲಿ ನಮ್ಮ ವಾಸ ಸಾಗುತಿರೆ
ಹೊಸ ಗೆಳೆಯ-ಗೆಳತಿಯರ ಜೊತೆ ಬೆರೆಯುತಿರೆ
ಜೀವನ ಒಂದು ಕವಲುದಾರಿ ಏನಿಸುತಿರೆ
ಸಾವಿರಾರು ನೋವುಗಳು ಹೊಸ ಚರಿತೆಯ ಬರೆಯುತಿರೆ
ನನ್ನ ಮನಸ್ಸು ಇವುಗಳ ನಡುವೆ ಸಿಕ್ಕು ಸಾಯುತಿರೆ
ಮನಸ್ಸಿನ ಚಿಂತೆಗೆ ನಾ ಸೋಲುತಿರೆ
ನೋವಲ್ಲಿ ನೋವ ಅನುಭವಿಸುತಿರೆ
ಹೊಸ ಖುಷಿ ಜೀವನಕ್ಕಾಗಿ ಕಾಯುತಿರೆ
ಪಟ್ಟ ನೋವುಗಳ ಮರೆಯುತಿರೆ                               
                                                                - ಸುನಿತಾ

ಮಕರ ಸಂಕ್ರಮಣ

ದಕ್ಷಿಣದಿಂದ ಉತ್ತರದೆಡೆಗೆ ಸೂರ್ಯನ ಪಯಣ
ಸ್ವರ್ಗ ಈ ಸಮಯದಲಿ ಹೊಂದಿದರೆ ಮರಣ
ಇದೇ ಈ ವರ್ಷಹಬ್ಬದ ಪ್ರಮುಖ ಕಾರಣ
ನೋವು ಮೀಟಿ ಬರುತಿದೆ ಮಕರ ಸ0ಕ್ರಮಣ
ಹಗಲು ಜಾಸ್ತಿ ಈ ಹಬ್ಬದ ವಿಶೇಷ
ಕರಗಿಸೋಣ ಮನದಲಿ ತುಂಬಿರುವ ಆವೇಷ
ಬದಲಿಸಬೇಕಾಗಿದೆ ದುಷ್ಟಗಳ ವೇಷ
ಹರಿಯಬೇಕಾಗಿದೆ ನಮ್ಮೆಲ್ಲರಲ್ಲಿ ಪಿಯೂಷ
ಹಂಚಿ ಸಂಭ್ರಮಿಸೋಣ ಕುಸಿರೆಳ್ಳು
ತುಂಬಿ-ತುಳುಕಲಿ ಪ್ರೀತಿಯ ಹನಿಗಳು
ಇದೆ ಅಲ್ಲವೆ ಜೀವನದ ಬಳುವಳಿಗಳು
ಇಲ್ಲೆ ಮರೆಯಬೇಕಿದೆ ನೋವುಗಳು
ಸಂಭ್ರಮದಿ ಬರಮಾಡಿಕೊಳ್ಳೋಣ ಈ ವರ್ಷ
ಮಕರ ಸಂಕ್ರಮಣದಿ0ದ ತ0ದ ಹರ್ಷ
ಸೂರ್ಯನ ಆ ನೇರಳ ಕಿರಣಗಳ ಸ್ಪರ್ಷ
ತೊಲಗಿಸೋಣ ಮಕರನಿಂದ ತುಂಬಿದ ಕರ್ಕಷ                   
                                                                        - ಸುನಿತಾ

ಆಗಮ - ಪ್ರೀತಿ - ಅಂತಿಮ

ಪ್ರೀತಿ ಆಗಮ
-------------------------

ಹುಡುಗ ಹೇಳಿದ ಚೆಲುವೆ ನಿನ್ನ ಕಣ್ಣು
ಮುಕ್ಕಿಸುವುದು ಎಲ್ಲ ಹುಡುಗರಿಗೆ ಮಣ್ಣು
ನೋಡಲು ಅದೆಷ್ಟು ಚ0ದ ನಿನ್ನ ಮುಖ
ಪೂರ್ಣ ಚ0ದಿರನು ಆಗುವನು ನಿನ್ನ ಸಖ

ಹುಡಿಗಿ ಹೇಳಿದಳು ಹುಡುಗನೆ ನಿನ್ನ ನಗೆ
ಮರೆಸುವುದು ನನ್ನಲಿರುವ ದು:ಖದ ಬಗೆ
ಸೋತೆ ನಾ ನಿನ್ನ ಸುಂದರ ಚೆಲುವಿಗೆ
ಕೋಟಿಕೊಟ್ಟರು ಸಾಲದು ನಿನ್ನ ಒಲವಿಗೆ

ಹುಡುಗನೆಂದ ಹುಡುಗಿ ನೀ ನನ್ನ ಜೀವ
ತುಂಬಿದೆ ನನ್ನಲಿ ನಿನ್ನ ಪ್ರೀತಿಯ ಭಾವ
ಹೇಗೆ ಮರೆಯಲಿ ನಾ ನೀ ತುಂಬಿದ ಪ್ರೀತಿ
ನೀ ನನ್ನೊಳಗಿರುವ  ದೇವತಾ ಮೂರ್ತಿ

ಹುಡುಗಿ ಎಂದಳು ಹುಡುಗನೆ ನೀ ನನ್ನ ಪ್ರಾಣ
ಹೊಂದೋಣ ಇಬ್ಬರು ಅಮರ ಪ್ರೀತಿಯ ಮರಣ
ಎಲ್ಲೆಡೆ ತುಂಬಿದೆ ಈ ಪ್ರೀತಿ ಜಗವ
ತಿಳಿಸೋಣ ನಿಜಪ್ರೀತಿಯ ಸಂದೇಶವ

ಪ್ರೀತಿ ಅಂತಿಮ
---------------------

ಹುಡುಗನೆಂದ ಹುಡುಗಿಗೆ ನೀ ತುಂಬ ದಪ್ಪ
ನಿನ್ನ ಕಂಡರೆ ಬೈಯುವರು ನನ್ನ ಅಪ್ಪ
ಆ ಗುಬ್ಬಿಗೂಡಿನಂತ ನಿನ್ನ ಕೂದಲು
ಮರೆಸುತಿದೆ ನನ್ನ ನಿನ್ನ ಕಡೆ ಬರಲು

ಹುಡುಗಿ ಎಂದಳು ಹುಡುಗ ನೀ ತುಂಬ ಕಪ್ಪು
ಕೆಲವೊಮ್ಮೆ ಅನಿಸುತಿದೆ ನಿನ್ನಾವರಿಸಿದೆ ಮುಪ್ಪು
ನಾ ತಿಳಿದಿದ್ದೆ ನಿನ್ನನ್ನು ವೀರ ಗಂಡುಗಲಿ
ಬಂದರೆ ಹೆದರಿ ಓಡುವೆ ಸಣ್ಣ ಇಲಿ

ಹುಡಗನೆಂದ ಹುಡುಗಿಗೆ ನೀ ತುಂಬ ಚಿಕ್ಕ
ನಾ ಸರಿಹೊಗುವುದಿಲ್ಲ ನಿನ್ನ ಪಕ್ಕ
ಮಿತಿ ಮೀರಿದೆ ನಿನ್ನ ಆ ನಡುಗೆ
ನಿನ್ನ ಹೊಡೆಯಲು ಬೇಕೆನಿಸುತಿದೆ ಬಡಿಗೆ

ಹುಡುಗಿಯೆಂದಳು ನಿನೇನು ಸುರಸುಂದರಾಂಗ
ನಿನ್ನ ನೋಡಿ ಕಾಗೆ ತೆಗೆಯುವುದು ತನ್ನ ರಾಗ
ಸಾಕು ನಿನಗೆ ಕೊಟ್ಟರೆ ಒಂದು ಕೋಟಿ
ಓಡಿ ಬಿಡುವೆ ನನ್ನ ಹೃದಯವ ಮೀಟಿ
                                                      - ಸುನಿತಾ.

ಬಾಗಲಕೋಟ

ಓದಲು ದೊರೆಯಿತು ನನಗೊಂದು ವಿದ್ಯಾಲಯ 
ಜೊತೆ ನೀಡಿತು ಒಳ್ಳೆಯ ಆಶ್ರಯ
ಇದೊಂದು  ಸಾವಿರಾರು ವಿದ್ಯಾರ್ಥಿಗಳ ಆಲಯ
ಇಲ್ಲಿ ವಿದ್ಯಾರ್ಜನೆಯ ಹಿಮಾಲಯ
ಸದಾ ಧಗಧಗನೆ ಉರಿಯುವ ಬಿಸಿಲು
ತೀಕ್ಷ್ಣ ಇದರ ಪ್ರಕಾಶದ ನಿಲುವು
ಜನ-ಮನದಲಿ ಮೂಡಿಸಿದೆ ಒಲವು
ಕಂಡೆ ನಾ ಗುಂಪಿನಲಿ ಬಲವು
ದೊರೆಯಿತು ನನಗೆ ಒಳ್ಳೆಯ ಸ್ನೇಹ
ಮರೆಸಿತು ನನ್ನ ಈ ಸ್ನೆಹದ ಮೋಹ
ಜಾರದಿರಿ ಕೇಳಿ ಸುಳ್ಳು ಊಹಾಪೋಹ
ಸದಾ ನಗುತಿರಲಿ ನಿರ್ಮಲ ನೇಹ
ನಿಲಯದಲಿ ಕಂಡೆ ರುಚಿಕರ ಊಟ
ಜೊತೆಯಲಿ ವಿದ್ಯಾಲಯದಲಿ ಗುರುಗಳ ಪಾಠ
ಇಲ್ಲಿನ ಬಿಸಿಲಿನ ತೀವ್ರದೆಡೆ ನಿಮ್ಮೆಲ್ಲರ ನೋಟ
ತೆಲೆಯತ್ತಿ ನಿಂತಿದೆ ನಮ್ಮ ಈ ಬಾಗಲಕೊಟ               
                                                                - ಸುನಿತಾ. 

ಜೀವನ ಸಾಗುತಿರೆ'